Loading...

News / Blog Details

  • Home
  • >
  • News / Blog Details

Dasara Dolls: ಬೆಂಗಳೂರಿನ ಗರುಡಾ ಮಾಲ್​ನಲ್ಲಿ ದಸರಾ ಗೊಂಬೆ ಪ್ರದರ್ಶನ, ಫೋಟೋಸ್ ಕಣ್ತುಂಬಿಕೊಳ್ಳಿ

4 Views | 2024-10-04 08:52:35

ನಾಡಿನಾದ್ಯಂತ ದಸರಾ ಸಂಭ್ರಮ ಮನೆ ಮಾಡಿದ್ದು, ನವರಾತ್ರಿ ಉತ್ಸವ ಶುರುವಾಗಿದೆ. ಇತ್ತ ಸಿಲಿಕಾನ್ ಸಿಟಿ ಬೆಂಗಳೂರಿನ ಗರುಡಾ ಮಾಲ್​ನಲ್ಲಿ ಗೊಂಬೆಗಳ ಉತ್ಸವ ಆಯೋಜನೆ ಮಾಡಲಾಗಿದ್ದು, ರಾಮಾಯಣ ಚರಿತ್ರೆ ಕಣ್ಮನ ಸೆಳೆಯುತ್ತಿದೆ. ಅಕ್ಟೋಬರ್ 3 ರಿಂದ ಅಕ್ಟೋಬರ್ 13ರವರೆಗೂ ಈ ಗೊಂಬೆಗಳ ಉತ್ಸವ ನಡೆಯಲಿದೆ.ಬೆಂಗಳೂರಿನ ಗರುಡಾ ಮಾಲ್‌ನಲ್ಲಿ ದಸರಾ ಹಬ್ಬದ ವಿಶೇಷವಾಗಿ ಗೊಂಬೆಗಳ ಉತ್ಸವ ಆಯೋಜಿಸಲಾಗಿದೆ. ಅಕ್ಟೋಬರ್ 3 ರಿಂದ ಅಕ್ಟೋಬರ್ 13ರವರೆಗೂ ಈ ಗೊಂಬೆಗಳ ಉತ್ಸವ ನಡೆಯಲಿದ್ದು, ಸ್ಯಾಂಡಲ್ವುಡ್ ನಟಿ ಅಮೃತಾ ಅಯ್ಯಂಗಾರ್ ಈ ಗೊಂಬೆಗಳ ಪ್ರದರ್ಶನಕ್ಕೆ ಚಾಲನೆ ನೀಡಿದರು.ಬಾಲ ರಾಮನ ಜನನ, ಸೀತೆಗಾಗಿ ಇಂದ್ರ ಧನಸ್ಸು ಮುರಿಯುವ ಶ್ರೀರಾಮ, ಸೀತೆ ಸ್ವಯಂವರ, ತಂದೆಗೆ ಕೊಟ್ಟ ಮಾತಿಗೆ ವನವಾಸಕ್ಕೆ ಹೋಗುವ ರಾಮ-ಲಕ್ಷ್ಮಣ-ಸೀತೆ, ಅರಣ್ಯದಲ್ಲಿ ಸೀತೆಯ ಅಪಹರಣ, ರಾಮ-ರಾವಣನ ಯುದ್ಧ. ಹೀಗೆ ಇಡೀ ರಾಮಾಯಣವನ್ನ ಗೊಂಬೆಗಳಲ್ಲಿ ಅತ್ಯದ್ಭುತವಾಗಿ ಪ್ರಸ್ತುತಪಡಿಲಾಗಿದೆ.ಇನ್ನೂ ಕಳೆದ‌ ವರ್ಷ ಮಹಾಭಾರತ ಥೀಮ್ ನಲ್ಲಿ ಮಾಡಲಾಗಿದ್ದ ಗೊಂಬೆಗಳ ಪ್ರದರ್ಶನ ಗಿನ್ನಿಸ್ ದಾಖಲೆ ಮಾಡಿತ್ತು.


Author:

...
Nanje Gowda SS

Administrator

I'm a dedicated news author with a passion for storytelling and a commitment to uncovering the truth. With more than 5 years of experience in journalism, I’ve covered a wide range of topics, from local stories that shape our communities to global events that impact the world at large.

No Reviews